ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಕೊನೆಗೂ ಇದುವರೆಗೆ ತಮಗೆ ಕಂಟಕವಾಗಿದ್ದ ಖ್ಯಾತ ತಾರೆ ನೊಜೊಮಿ ಒಕುಹಾರ ವಿರುದ್ಧ ಗೆಲುವು ದಾಖಲಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಚಾಂಪಿಯನ್ ಆಗಿದ್ದಾರೆ.ಫೈನಲ್ ನಲ್ಲಿ ಒಕುಹಾರ ವಿರುದ್ಧ 21-19, 21-17 ಅಂತರದಿಂದ ಗೆಲುವು ಸಾಧಿಸಿದ ಸಿಂಧೂ ಹಲವು ದಿನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಂಧು ಫಾರ್ಮ್ ಕೊಂಚ ತಗ್ಗಿತ್ತು. ಇದೀಗ ಅವರು ಭರ್ಜರಿಯಾಗಿ