ಬೆಂಗಳೂರು: ಮೂರು ತಿಂಗಳ ವಿಶ್ರಾಂತಿಯ ಬಳಿಕ ಎರಡು ಪಂದ್ಯಗಳಾಡಿದ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದಾಗಿ ಈಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ ಸಿಎ)ಯ ಕಾರ್ಯ ವೈಖರಿ ಬಗ್ಗೆಯೇ ಪ್ರಶ್ನೆ ಮೂಡಿದೆ. ಬೆಂಗಳೂರಿನಲ್ಲಿ ಮೂರು ತಿಂಗಳು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡರೂ ಭುವನೇಶ್ವರ್ ಕುಮಾರ್ ನಿಜವಾದ ಸಮಸ್ಯೆಯೇನೆಂದು ಪತ್ತೆ ಮಾಡದೇ ಅವರನ್ನು ಫಿಟ್ ಎಂದು ಘೋಷಿಸಿ ಆಟದ ಕಣಕ್ಕೆ ಕಳುಹಿಸಲಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ.