ಚೆನ್ನೈ: ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಟ್ವಿಟರ್ ನಲ್ಲಿ ಅಭಿಮಾನಿಗಳ ಜತೆ ಕಿತ್ತಾಡಿಕೊಂಡ ಘಟನೆ ನಡೆದಿದೆ.ಬ್ರಿಸ್ಬೇನ್ ನಲ್ಲಿ ಮೊನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಬೌಂಡರಿ ಲೈನ್ ಗಾತ್ರದ ಬಗ್ಗೆ ಅಶ್ವಿನ್ ಟ್ವಿಟರ್ ನಲ್ಲಿ ಅಪಸ್ವರವೆತ್ತಿದ್ದರು. ಬೌಂಡರಿ ಗೆರೆ ದೊಡ್ಡದಾಯ್ತು. ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ್ದಲ್ಲ ಎಂದು ಅಶ್ವಿನ್ ತಗಾದೆ ತೆಗೆದಿದ್ದರು.ಅಶ್ವಿನ್ ಟ್ವೀಟ್ ಗೆ ಅಭಿಮಾನಿಯೊಬ್ಬರು ಹಾಗಿದ್ದರೆ ನೀವು ತಂಡದಲ್ಲಿದ್ದಿದ್ದರೆ