ಮುಂಬೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ರವಿಶಾಸ್ತ್ರಿ ಕೋಚ್ ಆಗಿದ್ದಾಗ ಮೂಲೆಗುಂಪು ಮಾಡಲಾಗಿತ್ತು ಎಂಬ ಆರೋಪಗಳಿತ್ತು. ಅದೀಗ ನಿಜವೆನಿಸುತ್ತಿದೆ.ಇತ್ತೀಚೆಗೆ ಅಶ್ವಿನ್ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವಿನ ವೇಳೆ ರವಿಶಾಸ್ತ್ರಿಯಿಂದ ತನಗಾದ ಅವಮಾನವನ್ನು ಹಂಚಿಕೊಂಡಿದ್ದಾರೆ.‘ಟೆಸ್ಟ್ ಸರಣಿ ಗೆಲುವಿನ ಬಳಿಕ ರವಿಶಾಸ್ತ್ರಿ ಅಂದು ಐದು ವಿಕೆಟ್ ಕಿತ್ತ ಕುಲದೀಪ್ ಯಾದವ್ ರನ್ನು ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂದು ಹೊಗಳಿದ್ದರು. ನನಗೆ ಆಗ ಹೇಗನಿಸಿತ್ತು ಎಂದರೆ ಯಾರೋ