ಮುಂಬೈ: ಕಳೆದ 8 ತಿಂಗಳಲ್ಲಿ ಟೀಂ ಇಂಡಿಯಾ ಒಟ್ಟು ಆರು ನಾಯಕರನ್ನು ಕಂಡಿದೆ. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.ಕಳೆದ 8 ತಿಂಗಳಲ್ಲಿ ನಾವು 6 ನಾಯಕರನ್ನು ಕಂಡಿದ್ದೇವೆ. ಆದರೆ ಇದು ನಾನು ಕೋಚ್ ಆಗಿ ತಂಡಕ್ಕೆ ಸೇರ್ಪಡೆಯಾದಾಗ ನನ್ನ ಯೋಜನೆಯ ಭಾಗವಾಗಿರಲಿಲ್ಲ’ ಎಂದಿದ್ದಾರೆ.‘ಹಾಗಿದ್ದರೂ ಕೊರೋನಾ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಇದು ಅನಿವಾರ್ಯ. ಇದರಿಂದಾಗಿ ನಾವೀಗ ಹಲವು ನಾಯಕರಿಗೆ ಅವಕಾಶ ಕೊಟ್ಟು ಬೆಳೆಸಿದ ಹಾಗಾಯ್ತು’