ಕೊಲೊಂಬೋ: ಫಾರ್ಮ್ ಕಳೆದುಕೊಂಡಿರುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಕೋಚ್ ರಾಹುಲ್ ದ್ರಾವಿಡ್ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಶ್ರೀಲಂಕಾ ಪ್ರವಾಸಕ್ಕಾಗಿ ಲಂಕಾದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾಗೆ ದ್ರಾವಿಡ್ ಕೋಚ್ ಮಾಡುತ್ತಿದ್ದಾರೆ. ಶಿಖರ್ ಧವನ್ ನೇತೃತ್ವದ ಯುವ ತಂಡಕ್ಕೆ ದ್ರಾವಿಡ್ ಮಾರ್ಗದರ್ಶನ ನೀಡುತ್ತಿದ್ದು, ಅದರಲ್ಲೂ ಚಾಹಲ್ ಗೆ ವಿಶೇಷವಾಗಿ ಸಲಹೆ ನೀಡಿದ್ದಾರೆ.ತಮಗೆ ದ್ರಾವಿಡ್ ರಿಂದ ಸಿಕ್ಕ ಮಾರ್ಗದರ್ಶನದ ಬಗ್ಗೆ ಚಾಹಲ್ ಹೇಳಿಕೊಂಡಿದ್ದಾರೆ. ‘ನೀವು ಏನು ಮಾಡುತ್ತಿದ್ದೀರೋ ಅದನ್ನೇ ಏಕಾಗ್ರತೆಯಿಂದ ಮಾಡು.