ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಮೊದಲ ಸರಣಿಯಲ್ಲೇ ಯಶಸ್ಸು ಕಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಇತ್ತೀಚೆಗಿನ ಸಂದರ್ಶನದಲ್ಲಿ ವಿನೂತನ ವಿಚಾರವೊಂದನ್ನು ಹೊರಗೆಡವಿದ್ದಾರೆ.ಕೋಚ್ ಆದ ಬಳಿಕ ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಬಳಿ ಖುದ್ದಾಗಿ ತೆರಳಿ ವೈಯಕ್ತಿಕವಾಗಿ ಮಾತನಾಡಿದ್ದರಂತೆ. ಹೀಗಂತ ರೋಹಿತ್ ಹೊಗಳಿದ್ದರು.ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಜೊತೆ ಸಂವಹನ ನಡೆಸುವ ರೀತಿಯಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಎಲ್ಲರೂ ಹೇಳುವಂತೆ ಒಬ್ಬ ಹೊರ ಹೋಗುವ ಆಟಗಾರನಾಗಿದ್ದರೂ ಸರಿ, ಆತನ ಜೊತೆಗೆ ಸ್ಪಷ್ಟವಾಗಿ