ಮುಂಬೈ: ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೈರು ಹಾಜರಾಗಲು ಕಾರಣ ರಾಹುಲ್ ದ್ರಾವಿಡ್ ಅಂತೆ!ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡದೇ ಇಂಗ್ಲಿಷ್ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ಕೊಹ್ಲಿ ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕೆ ರಾಹುಲ್ ದ್ರಾವಿಡ್ ಸಲಹೆಯೇ ಕಾರಣ ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.ದ.ಆಫ್ರಿಕಾ ಪ್ರವಾಸ ಮಾಡಿದಾಗ ಟೀಂ ಇಂಡಿಯಾಗೆ ಸಾಕಷ್ಟು ತಯಾರಿ ನಡೆಸಲು ಅವಕಾಶ