ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದಂತೆ ಭಾರತದ ಮೇಲೂ ಚೋಕರ್ಸ್ ಹಣೆಪಟ್ಟಿ ಬಿದ್ದಿದೆ. ಆ ಕಳಂಕ ತೀರಿಸುವ ಜವಾಬ್ಧಾರಿ ಈಗ ರಾಹುಲ್ ದ್ರಾವಿಡ್ ಮೇಲಿದೆ.ಹಿಂದೆ ಆಟಗಾರನಾಗಿದ್ದಾಗ ದ್ರಾವಿಡ್ ಆಪತ್ ಬಾಂಧವರಾಗಿ ಟೀಂ ಇಂಡಿಯಾವನ್ನು ಅನೇಕ ಸಂದರ್ಭಗಳಲ್ಲಿ ಕಾಪಾಡಿದ್ದಾರೆ. ಈಗ ಕೋಚ್ ಆಗಿ ದ್ರಾವಿಡ್ ಗೆ ಟೀಂ ಇಂಡಿಯಾವನ್ನು ಮತ್ತೆ ಐಸಿಸಿ ಟೂರ್ನಿಗಳಲ್ಲಿ ಗೆಲ್ಲಿಸುವ ಜವಾಬ್ಧಾರಿ ಬಿದ್ದಿದೆ.ರೋಹಿತ್ ಶರ್ಮಾ ಟಿ20 ನಾಯಕರಾಗುವುದರೊಂದಿಗೆ