ಕೋಲ್ಕೊತ್ತಾ: ನವಂಬರ್ 22 ರಿಂದ ಈಡನ್ ಗಾರ್ಡನ್ ನಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಜೋರಾಗಿದ್ದರೆ, ಇತ್ತ ವಾಲ್ ರಾಹುಲ್ ದ್ರಾವಿಡ್ ಇದೊಂದರಿಂದಲೇ ಟೆಸ್ಟ್ ಕ್ರಿಕೆಟ್ ಉದ್ದಾರವಾಗದು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನತ್ತ ಜನರನ್ನು ಆಕರ್ಷಿಸಲು ಹಗಲು ರಾತ್ರಿ ಟೆಸ್ಟ್ ಪಂದ್ಯ ಉತ್ತಮ ವೇದಿಕೆಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ದ್ರಾವಿಡ್ ಇದೊಂದೇ ಸಾಕಾಗದು ಎಂದಿದ್ದಾರೆ.ಟೆಸ್ಟ್ ಕ್ರಿಕೆಟ್ ಉದ್ದಾರ ಮಾಡಲು