ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಇನ್ನು ಸ್ಥಾನವಿಲ್ಲ ಎಂಬ ಕಾರಣಕ್ಕೆ ನಿವೃತ್ತಿಗೆ ಸೂಚಿಸಿದ್ದರು ಎಂಬ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಆರೋಪಗಳಿಗೆ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ.ಮೊನ್ನೆಯಷ್ಟೇ ವೃದ್ಧಿಮಾನ್ ಸಹಾ, ತಮಗೆ ಇನ್ನು ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲ್ಲ. ಹೀಗಾಗಿ ಪರ್ಯಾಯ ಮಾರ್ಗ ಹುಡುಕುವುದು ಉತ್ತಮ ಎಂದು ಪರೋಕ್ಷವಾಗಿ ನಿವೃತ್ತಿಗೆ ಪ್ರೇರೇಪಿಸಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ, ಗಂಗೂಲಿ ಕೂಡಾ ಹಿಂದೊಮ್ಮೆ ಕೊಟ್ಟ ಭರವಸೆ ಮರೆತು ಈಗ ಕೈ ಬಿಟ್ಟಿದ್ದಾರೆ ಎಂದು