ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಕಳೆದ 15 ವರ್ಷಗಳಲ್ಲಿ ಭಾರತ ಕಂಡಂತಹ ಅತ್ಯುತ್ತಮ ಕ್ರಿಕೆಟ್ ತಂಡವೇ? ಈ ಪ್ರಶ್ನೆಗೆ ಭಾರತ ಎ ತಂಡದ ಕೋಚ್ ಕೂಡಾ ಆಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಉತ್ತರಿಸಿದ್ದಾರೆ.ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಭಾರತ 15 ವರ್ಷಗಳಲ್ಲೇ ಕಂಡ ಅತ್ಯುತ್ತಮ ತಂಡವಿದು ಎಂದು ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ದ್ರಾವಿಡ್ ಅಭಿಪ್ರಾಯವೇನು?ರವಿಶಾಸ್ತ್ರಿ ಕಾಮೆಂಟ್ ನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡವು.