ರಾಜ್ ಕೋಟ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಸ್ಥಾನ ಪಡೆಯುತ್ತಿರುವ ಪ್ರತಿಯೊಬ್ಬ ಕ್ರಿಕೆಟಿಗನೂ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಬರುತ್ತಿರುವವರೇ. ಅಂತಹ ಮತ್ತೊಬ್ಬ ಪ್ರತಿಭೆ ಪೃಥ್ವಿ ಶಾ ರೂಪದಲ್ಲಿ ಇಂದು ಟೀಂ ಇಂಡಿಯಾಕ್ಕೆ ಸಿಕ್ಕಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ ಪೃಥ್ವಿ ಶಾ ಆಟದ ಹಿಂದೆ ದ್ರಾವಿಡ್ ಪ್ರಭಾವ ಖಂಡಿತಾ ಇದೆ. ಶಿಷ್ಯನ ಆಟ ನೋಡಿ ದ್ರಾವಿಡ್ ಖಂಡಿತಾ ಹೆಮ್ಮೆಪಟ್ಟಿರುತ್ತಾರೆ. ಭಾರತ ಎ ತಂಡದ ಕೋಚ್ ಆಗಿ ದ್ರಾವಿಡ್ ಪ್ರಭಾವ ಇಂದಿನ