ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಐಯರ್ ಇದಕ್ಕೆ ರಾಹುಲ್ ದ್ರಾವಿಡ್ ಕೊಡುಗೆ ಕಾರಣ ಎಂದಿದ್ದಾರೆ.ಕೋಚ್ ರಾಹುಲ್ ದ್ರಾವಿಡ್ ತಮಗೆ ನೀಡಿದ ಸಲಹೆಯನ್ನು ಅವರು ಈ ಸಂದರ್ಭದಲ್ಲಿ ನೆನೆಸಿಕೊಂಡಿದ್ದಾರೆ. ಇದು ಐಯರ್ ಪಾಲಿನ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು.ಈ ಇನಿಂಗ್ಸ್ ಗೆ ಮೊದಲು ರಾಹುಲ್ ಸರ್ ನನ್ನ ಬಳಿ ಎಷ್ಟು ಸಾಧ್ಯವೋ ಅಷ್ಟು ಬಾಲ್ ಎದುರಿಸು