ಬೆಂಗಳೂರು: ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ನೆರವಿಗೆ ಎನ್ ಸಿಎ ಅಧ್ಯಕ್ಷರೂ ಆಗಿರುವ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನೆರವಿಗೆ ಧಾವಿಸಿದ್ದಾರೆ.ನಾಳೆ ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆಯಲಿರುವುದರಿಂದ ಟೀಂ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದೆ. ಇಲ್ಲಿ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವಾಗ ದ್ರಾವಿಡ್ ಭೇಟಿ ನೀಡಿದ್ದಾರೆ.ಈ ವೇಳೆ ದ್ರಾವಿಡ್ ವಿಶೇಷವಾಗಿ ಪಂತ್ ಮತ್ತು ರಾಹುಲ್ ಬ್ಯಾಟಿಂಗ್ ಕಡೆಗೆ