ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ನಿರಾಸಕ್ತಿ ತೋರಿಸಿರುವ ರಾಹುಲ್ ದ್ರಾವಿಡ್ ಈಗ ಐಪಿಎಲ್ ಕಣಕ್ಕೆ ಮರಳುವ ಸುದ್ದಿ ಕೇಳಿಬರುತ್ತಿದೆ.ರಾಹುಲ್ ದ್ರಾವಿಡ್ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಮತ್ತೆ ತಂಡದ ಮುಖ್ಯ ಕೋಚ್ ಆಗಿ ಇನ್ನೊಂದು ಅವಧಿಗೆ ಮುಂದುವರಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಅವರ ಸ್ಥಾನಕ್ಕೆ ಮತ್ತೊಬ್ಬ ಕೋಚ್ ಹುಡುಕಾಟ ನಡೆದಿದೆ.ದ್ರಾವಿಡ್ ಈಗ ಐಪಿಎಲ್ ತಂಡವೊಂದಕ್ಕೆ ಕೋಚ್ ಆಗಿ ಬರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.