ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನ ಆರಂಭದಿಂದ ಕೊನೆಯವರೆಗೂ ಮಳೆ ಶಾಪವಾಗಿ ಕಾಡಿತು. ಇದರಿಂದಾಗಿ ಆಟದ ರಸದೌತಣವೇ ಹಾಳಾಯಿತು ಎನ್ನುವ ಬೇಸರ ಅಭಿಮಾನಿಗಳದ್ದು. ಆದರೆ ಟೀಂ ಇಂಡಿಯಾಗೆ ಐಸಿಸಿಯ ಕೂಟದ ಫೈನಲ್ಸ್ ನಲ್ಲಿ ಮಳೆ ಕಾಟ ಕೊಟ್ಟಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2002 ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಭಾರತ-ಶ್ರೀಲಂಕಾ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಆ ಕೂಟದಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ