ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ಪಂದ್ಯವನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ ಎದುರಾಗಿದೆ. ಐತಿಹಾಸಿಕ ಟೆಸ್ಟ್ ಪಂದ್ಯದ ಪೂರ್ತಿ ಮಳೆಯದ್ದೇ ಮೆರೆದಾಟವಾಗುತ್ತಿದೆ. ಇದರಿಂದಾಗಿ ಆಟದ ನಿಜವಾದ ಮಜಾ ಸಿಗುತ್ತಿಲ್ಲ. ಇಂತಹ ಮಹತ್ವದ ಪಂದ್ಯ ಮಳೆಯಿಂದಾಗಿ ಹಾಳಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.ಮೊದಲ ದಿನ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನವೂ ಮಂದ ಬೆಳಕಿನ ಕಾರಣದಿಂದ ಬೇಗನೇ ಆಟ ಮುಗಿದಿತ್ತು. ಇದೀಗ