ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಗಿಂತ ಹೆಚ್ಚು ಮಳೆಯದ್ದೇ ಆಟ ನಡೆಯುತ್ತಿರುವುದರಿಂದ ಆಟಗಾರರು ಹತಾಶೆಗೊಳಗಾಗಿದ್ದಾರೆ. ನಿನ್ನೆ ಮಧ್ಯಾಹ್ನ ಆರಂಭವಾಗಿದ್ದ ಪಂದ್ಯ ಕೇವಲ 12 ಓವರ್ ಗಳಿಗೆ ದಿನದಾಟ ಮುಗಿದಿತ್ತು. ಇಂದು ಮತ್ತೆ ಮಳೆಯ ಭಯದಲ್ಲೇ ಪಂದ್ಯ ಆರಂಭವಾಗಿ ಹಾಗೂ ಹೀಗೂ 32 ಓವರ್ ಗಳ ಆಟವಾದ ಬಳಿಕ ಮತ್ತೆ ಮಳೆಯ ಕಾಟಕ್ಕೆ ಇಂದಿನ ದಿನದಾಟವನ್ನೂ ಸ್ಥಗಿತಗೊಳಿಸಲಾಯಿತು.ಕೋಲ್ಕೊತ್ತಾದಲ್ಲಿ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದರಿಂದ