ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ, ಹನಿ ಮಳೆಯಾಗುತ್ತಿದ್ದು, ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯುವುದು ಅನುಮಾನವಾಗಿದೆ.ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಐದನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಬೇಕಿದೆ. ಆದರೆ ಬೆಳಿಗ್ಗೆಯಿಂದಲೇ ಇಲ್ಲಿ ಮಳೆಯ ವಾತಾವರಣವಿದೆ.ಇದೀಗ ಸಂಜೆ 7 ಗಂಟೆಗೆ ಪಂದ್ಯ ನಿಗದಿಯಾಗಿದೆ. ಆದರೆ ಸಂಜೆಯಾಗುತ್ತಿದ್ದಂತೇ ಮಳೆ ಹನಿ ಜೋರಾಗಿದ್ದು, ಒಂದು ರೀತಿಯ ಚಳಿಯ ವಾತಾವರಣವಿದೆ.