ತಿರುವನಂತಪುರಂ: ಸರಣಿ ಗೆಲ್ಲಬೇಕಾದರೆ ಉಭಯ ತಂಡಕ್ಕೂ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಆದರೆ ತಿರುವನಂತಪುರಂನ ಗ್ರೀನ್ ಫೀಲ್ಡ್ ನಲ್ಲಿ ಇಂದು ಪಂದ್ಯ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಮಳೆ. ನಿನ್ನೆಯ ಮಳೆಗೆ ಮೈದಾನ ಪೂರ್ತಿ ಕೆಸರು ಗೆದ್ದೆಯಂತಾಗಿತ್ತು. ಇಂದೂ ಕೂಡಾ ಮಳೆ ಬರುವ ನಿರೀಕ್ಷೆಯಿದ್ದು, ಮೈದಾನ ಒಣಗಿಸಿ ಪಂದ್ಯಕ್ಕೆ ಸಿದ್ಧ ಮಾಡಿಕೊಡಲೂ ಸಿಬ್ಬಂದಿಗಳಿಗೆ ಅವಕಾಶವಿಲ್ಲದಂತಾಗಿದೆ.29 ವರ್ಷಗಳ ಬಳಿಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ.