Widgets Magazine

ಮಳೆಯಿಂದಾಗಿ ರದ್ದಾದ ಭಾರತ-ದ.ಆಫ್ರಿಕಾ ಮೊದಲ ಟಿ20

ಧರ್ಮಶಾಲಾ| Krishnaveni K| Last Modified ಸೋಮವಾರ, 16 ಸೆಪ್ಟಂಬರ್ 2019 (08:56 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ.

 
ಬೆಳಿಗ್ಗಿನಿಂದಲೇ ಇಲ್ಲಿ ಮಳೆಯಾಗುತ್ತಿತ್ತು. ಹೀಗಾಗಿ ಕ್ರೀಡಾಂಗಣದ ತುಂಬಾ ನೀರು ತುಂಬಿತ್ತು. ಸಂಜೆ ವೇಳೆಗೂ ಹನಿ ಮಳೆ ಮುಂದುವರಿದಿತ್ತು. ಈ ಸಂದರ್ಭದಲ್ಲಿ ಮೈದಾನ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರೂ ಕವರ್ ಮೇಲೆ ತುಂಬಿದ್ದ ನೀರು ತೆಗೆಯಲು ಸಾಧ್ಯವಾಗಲಿಲ್ಲ.
 
ಹೀಗಾಗಿ ಟಾಸ್ ಕೂಡಾ ನಡೆಯಲಿಲ್ಲ. ಕನಿಷ್ಠ ಐದು ಓವರ್ ಗಳ ಪಂದ್ಯವನ್ನು ನಡೆಸಲು ಮೈದಾನದ ಸ್ಥಿತಿ ಸರಿಯಿರದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇದರಲ್ಲಿ ಇನ್ನಷ್ಟು ಓದಿ :