ವಿಶ್ವಕಪ್ 2019: ಸೆಮಿಫೈನಲ್ ಪಂದ್ಯಕ್ಕೆ ಮಳೆ ಭೀತಿ! ಮಳೆ ಬಂದರೆ ಪಂದ್ಯದ ಗತಿ ಏನಾಗುತ್ತೆ?

ಲಂಡನ್| Krishnaveni K| Last Modified ಮಂಗಳವಾರ, 9 ಜುಲೈ 2019 (09:16 IST)
ಲಂಡನ್: ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಮೊದಲ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ.
 > ಇದು ಅಭಿಮಾನಿಗಳ ಪಾಲಿಗೆ ನಿರಾಶೆಯ ಸುದ್ದಿ. ಹವಾಮಾನ ವರದಿ ಪ್ರಕಾರ ಇಂದು ಮ್ಯಾಂಚೆಸ್ಟರ್ ನಲ್ಲಿ ಮಳೆಯಾಗುವ ಸಾಧ‍್ಯತೆಯಿದೆ. ಒಂದು ವೇಳೆ ಮಳೆ ಬಂದರೆ ಸೆಮಿಫೈನಲ್ ಪಂದ್ಯದ ಗತಿಯೇನು?>   ಈಗಾಗಲೇ ಐಸಿಸಿ ಮಳೆ ಬಂದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿದೆ. ಅಂದರೆ ಇಂದು ಮಳೆ ಬಂದು ಆಟ ಸಂಪೂರ್ಣ ರದ್ದಾದರೆ ನಾಳೆ ಪಂದ್ಯ ನಡೆಯಲಿದೆ.  ಆದರೆ ಡಕ್ ವರ್ತ್ ಲೂಯಿಸ್ ನಿಯಮ ಜಾರಿಗೆ ಬಂದು ಒಂದು ತಂಡಕ್ಕೆ ಅನ್ಯಾಯವಾಗದೇ ಇದ್ದರೆ ಸಾಕು ಎನ್ನುವುದೇ ಅಭಿಮಾನಿಗಳ ಪ್ರಾರ್ಥನೆ.ಇದರಲ್ಲಿ ಇನ್ನಷ್ಟು ಓದಿ :