ನವದೆಹಲಿ: ಪಂದ್ಯ ನಡೆಯುವ ವೇಳೆ ನೆಚ್ಚಿನ ಕ್ರಿಕೆಟ್ ತಾರೆಯರನ್ನು ನೋಡಲು, ಸ್ಪರ್ಶಿಸಲು ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದು ನೋಡಿದ್ದೇವೆ. ಆದರೆ ಈ ಘಟನೆ ಅದನ್ನೂ ಮೀರಿದೆ. ದೆಹಲಿ ಮತ್ತು ಉತ್ತರ ಪ್ರದೇಶ ನಡುವೆ ಪಾಲಮ್ ವಾಯುಪಡೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದ ವೇಳೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ತನ್ನ ವ್ಯಾಗನಾರ್ ಕಾರನ್ನು ಮೈದಾನದೊಳಕ್ಕೆ ನುಗ್ಗಿಸಿದ್ದಾನೆ!ಈತ ಕುಡಿದು ವಾಹನ ಚಲಾಯಿಸಿದ್ದ ಎನ್ನಲಾಗಿದೆ. ಈ ರೀತಿ ಪಂದ್ಯ ನಡೆಯುವಾಗ ವಾಹನವೇ ಮೈದಾನದೊಳಕ್ಕೆ ನುಗ್ಗಿದಂತಹ ಗಂಭೀರ