ನಾಗ್ಪುರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮೊದಲ ದಿನ ಭೋಜನ ವಿರಾಮಕ್ಕೂ ಮೊದಲೇ ಕರ್ನಾಟಕ ಹೆಡೆ ಮುರಿ ಕಟ್ಟಿದೆ. ಊಟದ ವಿರಾಮದ ವೇಳೆಗೆ ಕೇವಲ 90 ರನ್ ಗಳಿಗೆ ಮುಂಬೈಯ 7 ವಿಕೆಟ್ ಕಿತ್ತಿರುವ ಕರ್ನಾಟಕ ಬೌಲರ್ ಗಳು ಎದುರಾಳಿಗೆ ಉಸಿರಾಡಲೂ ಅನುವು ಮಾಡಿಕೊಡುತ್ತಿಲ್ಲ. ಸದ್ಯಕ್ಕೆ ಅಖಿಲ್ ಹೆರ್ ವಾಡ್ಕರ್ (28) ಮಾತ್ರ ಏಕೈಕ ಭರವಸೆಯಾಗಿ ಉಳಿದಿದ್ದಾರೆ.ಕರ್ನಾಟಕದ