ಕೋಲ್ಕೊತ್ತಾ: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ದಿಡೀರ್ ಕುಸಿತದಿಂದಾಗಿ ಆತಂಕದ ಸುಳಿಗೆ ಸಿಲುಕಿದ್ದ ಕರ್ನಾಟಕ ರಣಜಿ ತಂಡ ಕೊನೆಗೂ ಕಳೆದ ವರ್ಷದ ಸೆಮಿಫೈನಲ್ ನಲ್ಲಿ ಮಾಡಿದಂತೆ ಸೋತು ನಿರಾಸೆ ಅನುಭವಿಸಿದೆ. ವಿದರ್ಭ ತಂಡದ ಎದುರು ಕೇವಲ 5 ರನ್ ಗಳಿಂದ ಸೋತು ಆರು ಬಾರಿಯ ಚಾಂಪಿಯನ್ ಕರ್ನಾಟಕ ಇದೀಗ ಏಳನೇ ಬಾರಿಗೆ ರಣಜಿ ಸುಲ್ತಾನನಾಗುವ ಕನಸಿಗೆ ತಣ್ಣೀರು ಹಾಕಿಕೊಂಡಿದೆ. ಈ ಋತುವಿನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ಹುಡುಗರು ಸೆಮಿಫೈನಲ್