ಕಾನ್ಪುರ: ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಮನೀಶ್ ಪಾಂಡೆ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಆದರೆ ದೇಗಾ ನಿಶ್ಚಲ್ ಕೂದಲೆಳೆಯಲ್ಲಿ ದ್ವಿಶತಕ ವಂಚಿತರಾಗಿದ್ದಾರೆ. ನಿನ್ನೆ 327 ಕ್ಕೆ 4 ವಿಕೆಟ್ ಕಳೆದುಕೊಂಡು ದಿನದಾಟ ಮುಕ್ತಾಯಗೊಳಿಸಿದ್ದ ಕರ್ನಾಟಕಕ್ಕೆ ಇಂದು ಮನೀಶ್ ಮತ್ತು ನಿಶ್ಚಲ್ ಭರ್ಜರಿ ತಳಪಾಯ ಹಾಕಿಕೊಟ್ಟರು. ಇವರಿಬ್ಬರ ಭರ್ಜರಿ ಜತೆಯಾಟದ ನೆರವಿನಿಂದ ಕರ್ನಾಟಕ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 642 ರನ್ ಗಳಿಸಿತ್ತು.ದಿನದಂತ್ಯಕ್ಕೆ ನಾಯಕ