ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದಿನಿಂದ ಕರ್ನಾಟಕ ತಂಡ ಬಲಿಷ್ಠ ಮುಂಬೈ ಎದುರಿಸುತ್ತಿದ್ದು ಮೊದಲ ಅವಧಿಯಲ್ಲೇ ನಾಯಕ ವಿನಯ್ ಕುಮಾರ್ ಅಬ್ಬರಿಸಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಕರ್ನಾಟಕ ಪರ ಆರಂಭದಲ್ಲಿಯೇ ನಾಯಕ ವಿನಯ್ ಕುಮಾರ್ ಮಾರಕ ಬೌಲಿಂಗ್ ನಡೆಸಿದ್ದಾರೆ. ಕೇವಲ 13 ರನ್ ಗಳಿಗೆ ಮುಂಬೈಯ ಮೂರು ವಿಕೆಟ್ ಕಿತ್ತಿದ್ದಾರೆ. ಈ ಮೂರೂ ವಿಕೆಟ್ ವಿನಯ್ ಕುಮಾರ್ ಪಾಲಾಗಿರುವುದು