ಮುಂಬೈ|
Krishnaveni K|
Last Modified ಸೋಮವಾರ, 6 ಜನವರಿ 2020 (11:51 IST)
ಮುಂಬೈ: ರಣಜಿ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಹಾವು ಪ್ರತ್ಯಕ್ಷವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಂದು ರಣಜಿ ಪಂದ್ಯದಲ್ಲೂ ಹಾವು ಪ್ರತ್ಯಕ್ಷವಾಗಿದೆ.
ಕರ್ನಾಟಕ ಮತ್ತು ಮುಂಬೈ ನಡುವೆ ನಿನ್ನೆ ಮುಕ್ತಾಯಗೊಂಡ ರಣಜಿ ಪಂದ್ಯದ ನಡುವೆ ಹಾವು ಪ್ರತ್ಯಕ್ಷವಾಗಿದೆ. ಇದರಿಂದಾಗಿ ಕೆಲವು ಕಾಲ ಪಂದ್ಯ ಸ್ಥಗಿತಗೊಂಡಿತು.
ಬಳಿಕ ಹಾವು ಹಿಡಿಯುವವರು ಬಂದು ಹಾವನ್ನು ಮೈದಾನದಿಂದ ಹೊರಕ್ಕೆ ತೆಗೆದುಕೊಂಡು ಹೋಗಬೇಕಾಯಿತು. ಈ ರೀತಿ ಈ ಋತುವಿನ ರಣಜಿ ಪಂದ್ಯದಲ್ಲಿ ಹಾವು ಪ್ರತ್ಯಕ್ಷವಾಗಿದ್ದು ಎರಡನೇ ಬಾರಿ.