ಮುಂಬೈ: ಸುರಕ್ಷಿತ ಸ್ಥಿತಿಯಲ್ಲಿದ್ದು ಇನ್ನೇನು ಮೊದಲ ಇನಿಂಗ್ಸ್ ಮುನ್ನಡೆ ಕಂಡಿತು ಎನ್ನುವಾಗಲೇ ಕರ್ನಾಟಕ ತಂಡ ಜಾರಿ ಬಿದ್ದಿದೆ. ಮುಂಬೈ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದಲ್ಲಿ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸಂಕಷ್ಟದಲ್ಲಿದೆ.ಮೊದಲ ಇನಿಂಗ್ಸ್ ನಲ್ಲಿ ಮುಂಬೈ 194 ಕ್ಕೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಕರ್ನಾಟಕ ನಿನ್ನೆಯ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್