ಮುಂಬೈ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಇನ್ನೇನು ಕುಸಿಯಿತು ಎನ್ನುವಾಗ ಕರ್ನಾಟಕಕ್ಕೆ ಬೌಲರ್ ಗಳು ಆಸರೆಯಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಸಾಧಿಸಿದ ಕರ್ನಾಟಕ ಈಗ ಮುಂಬೈ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದೆ.ಮೊದಲ ಇನಿಂಗ್ಸ್ ನಲ್ಲಿ 218 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕಕ್ಕೆ 24 ರನ್ ಗಳ ಮುನ್ನಡೆ ಲಭಿಸಿತು. ಬಳಿಕ ಇನಿಂಗ್ಸ್ ಆರಂಭಿಸಿದ ಮುಂಬೈಗೆ ಅನುಭವಿ ವೇಗಿ ಅಭಿಮನ್ಯು ಮಿಥುನ್ ಸಿಂಹ ಸ್ವಪ್ನರಾದರು.