ಮುಂಬೈ: ಹೊಸ ವರ್ಷದ ಆರಂಭದಲ್ಲೇ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಹೊಸ ಸವಾಲು ಎದುರಾಗಿದೆ. ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಇಂದು ಪ್ರಬಲ ಮುಂಬೈ ವಿರುದ್ಧ ಸೆಣಸಲಿದೆ. ಇಂದಿನಿಂದ ಜನವರಿ 6 ರವರೆಗೆ ಮುಂಬೈಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಪಂದ್ಯ ಆಡಲಿದೆ. ಇದುವರೆಗೆ ಉಭಯ ತಂಡಗಳು ರಣಜಿ ಟೂರ್ನಿಯಲ್ಲಿ 26 ಪಂದ್ಯಗಳಲ್ಲಿ ಎದುರುಬದುರಾಗಿದೆ. ಇದರಲ್ಲಿ ಕೇವಲ 3 ಗೆಲುವು ಕಂಡಿದ್ದು, 10 ರಲ್ಲಿ ಸೋಲನುಭವಿಸಿದೆ.ಹೀಗಾಗಿ ಮೇಲ್ನೋಟಕ್ಕೆ ಮುಂಬೈ ಪ್ರಬಲವಾಗಿದೆ.