Widgets Magazine

ರಣಜಿ ಕ್ರಿಕೆಟ್: ಸೋಲಿನ ಸುಳಿಯಲ್ಲಿ ಕರ್ನಾಟಕ

ರಾಜ್ ಕೋಟ್| Krishnaveni K| Last Modified ಮಂಗಳವಾರ, 14 ಜನವರಿ 2020 (09:36 IST)
ರಾಜ್ ಕೋಟ್: ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ಫಾಲೋ ಆನ್ ಹೇರಿದ್ದು, ಸೋಲಿನ ಸುಳಿಯಲ್ಲಿದೆ.
 

ಮೊದಲ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ದ್ವಿಶತಕ ಹಾಗೂ ಶೆಲ್ಡನ್ ಜಾಕ್ಸನ್ ಶತಕದ ನೆರವಿನಿಂದ ಸೌರಾಷ್ಟ್ರ 7 ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ 171 ಕ್ಕೆ ಆಲೌಟ್ ಆಯಿತು. ಬಳಿಕ ಸೌರಾಷ್ಟ್ರ ಫಾಲೋ ಆನ್ ಹೇರಿತು.
 
ಇದೀಗ ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ಹಾಗಿದ್ದರೂ ಇನ್ನೂ 380 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದೆ. ಈ ಮೊತ್ತ ದಾಟಿ ಎದುರಾಳಿಗೆ ಗೆಲುವಿನ ಗುರಿ ನೀಡುವುದು ಅಷ್ಟು ಸುಲಭದ ಮಾತಲ್ಲ.
ಇದರಲ್ಲಿ ಇನ್ನಷ್ಟು ಓದಿ :