ರಣಜಿ ಕ್ರಿಕೆಟ್: ದೈತ್ಯ ಸಂಹಾರ ಮಾಡಿದ ಕರ್ನಾಟಕ

ಮುಂಬೈ| Krishnaveni K| Last Modified ಭಾನುವಾರ, 5 ಜನವರಿ 2020 (16:51 IST)
ಮುಂಬೈ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಪ್ರಬಲ ಮುಂಬೈಯನ್ನೇ ಮಣಿಸಿದ ಕರ್ನಾಟಕ ಹೊಸ ವರ್ಷದಲ್ಲಿ ಶುಭಾರಂಭ ಮಾಡಿದೆ. ಇಂದು ಮೂರನೇ ದಿನಕ್ಕೇ ಪಂದ್ಯ ಮುಗಿದಿದೆ.

 

ಗೆಲುವಿಗೆ 125 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ ಗುರಿ ಮುಟ್ಟಿತು. ದ್ವಿತೀಯ ಇನಿಂಗ್ಸ್ ನಲ್ಲಿ ಮುಂಬೈ 149 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ನಲ್ಲಿ 194 ರನ್ ಗಳಿಸಿತ್ತು. ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 218 ರನ್ ಗಳಿಸಿತ್ತು.
 
ಕರ್ನಾಟಕ ಪರ ದೇವದತ್ತ ಪಡಿಕ್ಕಲ್ 50 ರನ್ ಗಳಿಸಿದರೆ ರವಿಕಾಂತ್ ಸಮರ್ಥ್ 34 ರನ್ ಗಳಿಸಿದರು. ಇದರೊಂದಿಗೆ ಕರ್ನಾಟಕ ಪೂರ್ಣ 6 ಅಂಕ ಪಡೆಯಿತು.
ಇದರಲ್ಲಿ ಇನ್ನಷ್ಟು ಓದಿ :