ದೆಹಲಿ: ಒಡಿಶಾ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದ್ದ ಕರ್ನಾಟಕ ತಂಡ ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳ ನೆರವಿನಿಂದ ಚೇತರಿಸಿಕೊಂಡಿದೆ. ಅಂತಿಮ ದಿನ ಊಟದ ವಿರಾಮಕ್ಕೆ 7 ವಿಕೆಟ್ ಕಳೆದುಕೊಂಡು 371 ರನ್ ಗಳಿಸಿದ್ದು, ಒಟ್ಟಾರೆ 208 ರನ್ ಗಳ ಮುನ್ನಡೆ ಪಡೆದುಕೊಂಡಿದೆ.ಕರ್ನಾಟಕಕ್ಕೆ ಆಸರೆಯಾದ ವಿಕೆಟ್ ಕೀಪರ್ ಸಿ. ಗೌತಮ್ 95 ರನ್ ಗಳಿಸಿ ಔಟಾದರು. ಈ ಮೂಲಕ ಐದೇ ರನ್ ಗಳಿಂದ ಶತಕ ವಂಚಿತರಾದರು.