ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಗೆಲುವಿಗೆ 149 ರನ್ ಗಳ ಗುರಿ

ಬೆಂಗಳೂರು| Krishnaveni K| Last Modified ಶುಕ್ರವಾರ, 14 ಫೆಬ್ರವರಿ 2020 (11:55 IST)
ಬೆಂಗಳೂರು: ಬರೋಡ ವಿರುದ್ಧ ರಣಜಿ ಟ್ರೋಫಿ ಪಂದ್ಯ ಗೆಲ್ಲಲು ಕರ್ನಾಟಕಕ್ಕೆ 149 ರನ್ ಗಳ ಸುಲಭ ಗುರಿ ನಿಗದಿಯಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಬರೋಡ 296 ರನ್ ಗಳಿಗೆ ಆಲೌಟ್ ಆಗಿತ್ತು.

 
ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ಮುನ್ನಡೆ ಸಾಧಿಸಿತ್ತು. ಹೀಗಾಗಿ ಗೆಲುವಿನ ಗುರಿ ಸುಲಭದ್ದಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ.
 
ಈ ಪಂದ್ಯ ಗೆದ್ದರೆ ಕರ್ನಾಟಕಕ್ಕೆ ಕ್ವಾರ್ಟರ್ ಫೈನಲ್ ಹಂತಕ್ಕೇರುವ ಹಾದಿ ಸುಗಮವಾಗಲಿದೆ. ಇನ್ನೂ ಒಂದು ದಿನದ ಪಂದ್ಯ ಬಾಕಿಯಿರುವುದರಿಂದ ಗೆಲುವಿನ ಹಾದಿ ಸುಲಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :