Widgets Magazine

ರಣಜಿ ಸೆಮಿಫೈನಲ್: ಕರ್ನಾಟಕದ ಪಾಲಿಗೆ ವಿಲನ್ ಆದ ಅಂಪಾಯರ್

ಬೆಂಗಳೂರು| Krishnaveni K| Last Modified ಭಾನುವಾರ, 27 ಜನವರಿ 2019 (18:01 IST)
ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಸೌರಾಷ್ಟ್ರ ಪರ ಚೇತೇಶ್ವರ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಅಜೇಯ ದ್ವಿಶತಕದ ಜತೆಯಾಟದಿಂದ ಕರ್ನಾಟಕಕ್ಕೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

 
ಇದರೊಂದಿಗೆ ಮತ್ತೊಮ್ಮೆ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಕನಸು ಸೆಮಿಫೈನಲ್ ಗೆ ಅಂತ್ಯಗೊಳ್ಳುತ್ತಿದೆ. ಟೀಂ ಇಂಡಿಯಾ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ 108 ರನ್ ಮತ್ತು ಶೆಲ್ಡನ್ 90 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದೀಗ ಸೌರಾಷ್ಟ್ರ 3 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ. ಗೆಲುವಿಗೆ ಇನ್ನು ಕೇವಲ 55 ರನ್ ಗಳಿಸಿದರೆ ಸಾಕಾಗಿದೆ.
 
ತಾಳ್ಮೆಯ ಇನಿಂಗ್ಸ್ ಆಡಿದ ಪೂಜಾರಗೆ ಅಂಪಾಯರ್ ನೀಡಿದ ವಿವಾದಾತ್ಮಕ ತೀರ್ಪು ಕೂಡಾ ವರವಾಯಿತು. ಇದರಿಂದಾಗಿ ಪೂಜಾರ ಜೀವದಾನ ಪಡೆದರು. ಇದರ ಹೊರತಾಗಿ ಇವರ ಇನಿಂಗ್ಸ್ ಕಳಂಕ ರಹಿತವಾಗಿತ್ತು. ಕರ್ನಾಟಕ ಪರ ವಿನಯ್ ಕುಮಾರ್ 2 ವಿಕೆಟ್ ಮತ್ತು ಅಭಿಮನ್ಯು ಮಿಥುನ್ 1 ವಿಕೆಟ್ ಪಡೆದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :