ಶಿವಮೊಗ್ಗ: ಗುಜರಾತ್ ವಿರುದ್ಧ ಸ್ವಲ್ಪದರಲ್ಲೇ ಗೆಲುವು ಮಿಸ್ ಮಾಡಿಕೊಂಡು ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡ ಇಂದು ದುರ್ಬಲ ರೈಲ್ವೇಸ್ ವಿರುದ್ಧ ರಣಜಿ ಪಂದ್ಯ ಆಡುತ್ತಿದೆ.ಟಾಸ್ ಗೆದ್ದ ರೈಲ್ವೇಸ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಕರ್ನಾಟಕಕ್ಕೆ ಸುಲಭ ಎದುರಾಳಿ ವಿರುದ್ಧ ಗೆಲ್ಲುವ ತವಕವಾದರೂ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಒತ್ತಡದಲ್ಲಿದೆ.ಹಾಗಿದ್ದರೂ ತವರು ನೆಲದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಕೊಂಚ ಸಮಾಧಾನಪಡಬಹುದಾಗಿದೆ. ಸದ್ಯಕ್ಕೆ ತನ್ನ ಗುಂಪಿನಲ್ಲಿ ಒಂದು ಗೆಲುವು,