Widgets Magazine

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ಮೇಲೆ ಸಂಕಟದ ಮೋಡ

ಜಮ್ಮು ಕಾಶ್ಮೀರ| Krishnaveni K| Last Modified ಗುರುವಾರ, 20 ಫೆಬ್ರವರಿ 2020 (16:31 IST)
ಜಮ್ಮು ಕಾಶ್ಮೀರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ವಿರುದ್ಧ ಕರ್ನಾಟಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, 2 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದೆ.

 
ಮಂದ ಬೆಳಕಿನಿಂದಾಗಿ ತಡವಾಗಿ ಆರಂಭವಾದ ಪಂದ್ಯ ಇಂದಿನ ದಿನಕ್ಕೆ ಕೇವಲ 6 ಓವರ್ ಗೇ ಮುಕ್ತಯವಾಗಿದೆ. ಮಂದ ಬೆಳಕಿನಿಂದಾಗಿ ದಿನದಾಟ ಬೇಗನೇ ಮುಕ್ತಾಯವಾದಾಗ ಕರ್ನಾಟಕ ತಂಡದ ಮೇಲೂ ಸಂಕಟದ ಛಾಯೆ ಆವರಿಸಿತ್ತು.
 
ಆರಂಭಿಕರಾದ ದೇವದತ್ತ ಪಡಿಕ್ಕಲ್ 2 ಮತ್ತು ರವಿಕಾಂತ್ ಸಮರ್ಥ್ 5 ರನ್ ಗಳಿಗೆ ವಿಕೆಟ್ ಒಪ್ಪಿಸಿ ಕರ್ನಾಟಕಕ್ಕೆ ಆರಂಭಿಕ ಆಘಾತ ನೀಡಿದ್ದಾರೆ. ಇದೀಗ ನಾಯಕ ಕರುಣ್ ನಾಯರ್ 4 ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :