ಮೈಸೂರು: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಪಂದ್ಯವಾಡುತ್ತಿರುವ ಕರ್ನಾಟಕ ಇಂದು ಮಹಾರಾಷ್ಟ್ರ ವಿರುದ್ಧ ಸೆಣಸಲಿದೆ.ಮೈಸೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಹಾರಾಷ್ಟ್ರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳೂ ಟೂರ್ನಿಯಲ್ಲಿ ಎರಡು ಪಂದ್ಯವಾಡಿದ್ದು, ಎರಡರಲ್ಲೂ ಡ್ರಾ ಸಾಧಿಸಿವೆ. ಹೀಗಾಗಿ ಎರಡೂ ತಂಡಗಳು ಮೊದಲ ಗೆಲುವಿನ ಹುಡುಕಾಟದಲ್ಲಿದೆ.ಕರ್ನಾಟಕ ತಂಡದ ಆಟಗಾರರಿಗೆ ಮೈಸೂರಿನ ಪಿಚ್ ಪರಿಸ್ಥಿತಿ ಚೆನ್ನಾಗಿ ಅರಿವಿರುವುದರಿಂದ ತವರಿನ ಬಲ ಸಾಥ್ ನೀಡಲಿದೆ. ಈ ಪಂದ್ಯಕ್ಕೂ ನಾಯಕ ವಿನಯ್