ಬೆಂಗಳೂರು: ಕರ್ನಾಟಕ ಮತ್ತು ಸೌರಾಷ್ಟ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ನಿರ್ಣಾಯಕ ಘಟ್ಟಕ್ಕೆ ತಲುಪಿದೆ.ಮೂರನೇ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿರುವ ಕರ್ನಾಟಕ ಒಟ್ಟಾರೆ ಮುನ್ನಡೆಯನ್ನು 276 ರನ್ ಗಳಿಗೆ ವಿಸ್ತರಿಸಿತು. ಸದ್ಯಕ್ಕೆ 61 ರನ್ ಗಳ ಮಹತ್ವದ ಜತೆಯಾಟವಾಡುತ್ತಿರುವ ಅಭಿಮನ್ಯು ಮಿಥುನ್ (35) ಮತ್ತು ಶ್ರೇಯಸ್ ಗೋಪಾಲ್ (61) ಕರ್ನಾಟಕದ ಭರವಸೆ ಹೆಚ್ಚಿಸಿದ್ದಾರೆ.ನಾಳೆ ಆದಷ್ಟು ರನ್ ಪೇರಿಸಿ ಕರ್ನಾಟಕ