ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜಸ್ಥಾನ ನೀಡಿದ 184 ರನ್ ಗಳ ಟಾರ್ಗೆಟ್ ಬೆನ್ನತ್ತಿದೆ.ಮೂರನೇ ದಿನದಂತ್ಯಕ್ಕೆ ಕರ್ನಾಟಕಕ್ಕೆ ಗೆಲುವು ತೂಗುಯ್ಯಾಲೆಯಂತಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿರುವ ಕರ್ನಾಟಕ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಗೆಲುವಿಗೆ ಇನ್ನೂ 139 ರನ್ ಗಳಿಸಬೇಕಿದೆ.ಕರ್ನಾಟಕ ಪರ ಆರಂಭಿಕರಾದ ದೇಗಾ ನಿಶ್ಚಲ್, ರವಿಕಾಂತ್ ಸಮರ್ಥ್ ತಲಾ 1 ಮತ್ತು 16 ರನ್ ಗಳಿಸಿ