ರಣಜಿ ಟ್ರೋಫಿ: ಕರ್ನಾಟಕಕ್ಕೆ ಚಿಗುರಿದ ಗೆಲುವಿನ ಕನಸು

ಬೆಂಗಳೂರು| Krishnaveni K| Last Modified ಗುರುವಾರ, 13 ಫೆಬ್ರವರಿ 2020 (16:31 IST)
ಬೆಂಗಳೂರು: ಬರೋಡ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಎರಡನೇ ದಿನವೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
 

ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ 233 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬರೋಡ ಕೇವಲ 85 ರನ್ ಗಳಿಗೆ ಸರ್ವಪತನ ಕಂಡಿತ್ತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬರೋಡ ದ್ವಿತೀಯ ದಿನದಾಟದಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿದೆ. ಈ ಮೂಲಕ ಕೇವಲ 40 ರನ್ ಗಳ ಮುನ್ನಡೆ ಸಾಧಿಸಿದೆ.
 
ಉತ್ತಮವಾಗಿ ಆಡುತ್ತಿದ್ದ ಅಹಮ್ಮದೂರ್ ಪಠಾಣ್ 90 ರನ್ ಗಳಿಸಿ ಪ್ರಸೀದ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದ್ದಾರೆ. ಉಳಿದಂತೆ ಕೆ ಗೌತಮ್ 4 ವಿಕೆಟ್ ಕಬಳಿಸಿದ್ದಾರೆ. ಇದರಿಂದಾಗಿ ಕರ್ನಾಟಕಕ್ಕೆ ಗೆಲುವಿನ ಕನಸು ಚಿಗುರಿದ್ದು, ಕ್ವಾರ್ಟರ್ ಫೈನಲ್ ಗೇರುವ ಹಾದಿ ಸುಗಮವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :