ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲೇ ಪಂದ್ಯ ನಡೆದರೂ ಮೈದಾನ ಭರ್ತಿಯಾಗುತ್ತದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವೆಂದರೆ ಜನರಲ್ಲಿ ಅಂತಹ ಉತ್ಸಾಹವಿರುತ್ತದೆ.ಆದರೆ ಇದೀಗ ಏಷ್ಯಾ ಕಪ್ ಕ್ರಿಕೆಟ್ ನ ಕೊಲೊಂಬೋದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಸೂಪರ್ ಫೋರ್ ಪಂದ್ಯ ವೀಕ್ಷಿಸಲು ಮೈದಾನದಲ್ಲಿ ವಿರಳ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.ಕಾರಣ, ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮೊದಲೇ ಸೂಚನೆಯಿತ್ತು. ಇದಕ್ಕೆ ಮೊದಲು ಪಲ್ಲಿಕೆಲೆಯಲ್ಲಿ ನಡೆದಿದ್ದ ಲೀಗ್ ಪಂದ್ಯದಲ್ಲೂ ಮಳೆಯಾಗಿ