ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿಯವರನ್ನೇ ಮುಂದುವರಿಸಿರುವ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ನಿರ್ಧಾರವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.ಟೀಂ ಇಂಡಿಯಾಗೆ ಹೊಸ ಕೋಚ್ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ರವಿಶಾಸ್ತ್ರಿಯನ್ನೇ ಮಂದುವರಿಸಿರುವುದು ಅಷ್ಟೊಂದು ಇಷ್ಟವಾದಂತೆ ತೋರುತ್ತಿಲ್ಲ. ಅವರನ್ನೇ ಮುಂದುವರಿಸುವುದಾದರೆ ಇಷ್ಟೆಲ್ಲಾ ನಾಟಕ ಬೇಕಿತ್ತಾ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ.ಕೆಲವರು ರವಿಶಾಸ್ತ್ರಿ ಕಾಮೆಂಟರಿ ಅದ್ಭುತ, ಆದರೆ ಕೋಚ್ ಆಗಿ ಅಲ್ಲ ಎಂದರೆ ಮತ್ತೆ ಕೆಲವರು ಆಯ್ತು