ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು 3-1 ರಿಂದ ಗೆದ್ದು ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಗಿಟ್ಟಿಸಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ಕಾರಣದಿಂದ ಬಯೋಬಬಲ್ ನಲ್ಲಿ ಆಟಗಾರರು ಕಾಲ ಕಳೆಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಂಡದ ಆಟಗಾರರ ಮನಸ್ಥಿತಿ ಹೇಗಿದೆ ಎಂದು ರವಿಶಾಸ್ತ್ರಿಗೆ ಕೇಳಿದಾಗ ಅವರು ಆಟಗಾರರಿಗೆ ಯಾವತ್ತೂ ಇದೇ ಚಿಂತೆಯಾಗಿದೆ ಎಂದಿದ್ದಾರೆ.‘ಬೆಳಿಗ್ಗೆ ಏಳುವಾಗಲೇ ಬಬಲ್...