Widgets Magazine

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿಯೇ ಪುನರಾಯ್ಕೆಯಾಗುವ ಸಾಧ್ಯತೆ

ಮುಂಬೈ| Krishnaveni K| Last Modified ಗುರುವಾರ, 18 ಜುಲೈ 2019 (09:59 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಹೊಸದಾಗಿ ಅರ್ಜಿಯೇನೋ ಆಹ್ವಾನಿಸಿದೆ. ಆದರೆ ಕೆಲವು ಮೂಲಗಳ ಪ್ರಕಾರ ರವಿಶಾಸ್ತ್ರಿಯೇ ಮತ್ತೆ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿದೆ.

 
ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಉತ್ತಮ ಸಮನ್ವಯತೆಯಿದೆ. ಈ ಹಿಂದೆ ಸಮನ್ವಯತೆಯ ಕಾರಣದಿಂದ ಅನಿಲ್ ಕುಂಬ್ಳೆ ಮತ್ತು ಕೊಹ್ಲಿ ನಡುವೆ ವೈಮನಸ್ಯವೇರ್ಪಟ್ಟಿತ್ತು. ಅದಾದ ಬಳಿಕ ರವಿಶಾಸ್ತ್ರಿ ಕೋಚ್ ಆಗಿ ಆಯ್ಕೆಯಾದ ಬಳಿಕ ನಾಯಕ ಮತ್ತು ಕೋಚ್ ನಡುವೆ ಉತ್ತಮ ಬಾಂಧವ್ಯವಿದೆ.
 
ಮುಖ್ಯವಾಗಿ ರವಿಶಾಸ್ತ್ರಿಗೆ ನಾಯಕ ಕೊಹ್ಲಿಯ ಬೆಂಬಲವಿದೆ. ಹೀಗಾಗಿ ತಂಡದಲ್ಲಿ ಮುಂದೆಯೂ ಯಾವುದೇ ಒಡಕು ಬಾರದಂತೆ ನೋಡಿಕೊಳ್ಳಲು ನಾಯಕನ ಮೆಚ್ಚಿನ ಕೋಚ್ ರವಿಶಾಸ್ತ್ರಿಯನ್ನೇ ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇದರಲ್ಲಿ ಇನ್ನಷ್ಟು ಓದಿ :