ಮುಂಬೈ: ಕೊರೋನಾವೈರಸ್ ನಿಂದಾಗಿ ದೇಶವಿಡೀ ಲಾಕ್ ಡೌನ್ ಆಗಿದೆಯೆಂದು ಎಲ್ಲರೂ ಬೇಸರದಲ್ಲಿದ್ದರೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮಾತ್ರ ಇದರಿಂದ ನಮಗೆ ಒಳ್ಳೆಯದೇ ಆಯ್ತು ಎಂದಿದ್ದಾರೆ. ಲಾಕ್ ಡೌನ್ ನಿಂದಾಗಿ ನಾವು ಬಹುದಿನಗಳಿಂದ ಬಯಸುತ್ತಿದ್ದ ಸುದೀರ್ಘ ವಿಶ್ರಾಂತಿ ಬಯಸದೇ ಸಿಕ್ಕಂತಾಗಿದೆ. ಇದು ಒಳ್ಳೆಯದೇ ಆಯ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ.ಎಲ್ಲರಿಗೂ ಇದು ಒಂದು ರೀತಿಯಲ್ಲಿ ಶಾಕ್ ನೀಡಿದ್ದು ನಿಜ. ಆದರೆ ನಾವು ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆಡಿದ ಮೇಲೆ ಬಹುಶಃ ವಿಶ್ರಾಂತಿಯಲ್ಲಿದ್ದಿದ್ದು