ಕೋಚ್ ಆಗಿ ಮುಂದುವರಿದ ಖುಷಿಯಲ್ಲಿ ರವಿಶಾಸ್ತ್ರಿ ಹೇಳಿದ್ದೇನು?

ಮುಂಬೈ, ಭಾನುವಾರ, 18 ಆಗಸ್ಟ್ 2019 (09:21 IST)

ಮುಂಬೈ: ಮತ್ತೊಂದು ಅವಧಿಗೆ ಟೀಂ ಇಂಡಿಯಾ ಕೋಚ್ ಆಗಿ ಪುನರಾಯ್ಕೆಯಾದ ರವಿಶಾಸ್ತ್ರಿ ವಿಡಿಯೋ ಸಂದೇಶ ಮೂಲಕ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.


 
ಮತ್ತೊಂದು ಬಾರಿಗೆ ನನ್ನನ್ನು ಆಯ್ಕೆ ಮಾಡಿರುವುದು ಗೌರವಯುತ ವಿಷಯ. ಇದಕ್ಕೆ ಕ್ರಿಕೆಟ್ ಸಲಹಾ ಸಮಿತಿಗೆ ಆಭಾರಿಯಾಗಿದ್ದೇನೆ ಎಂದು ರವಿಶಾಸ್ತ್ರಿ ವಿಡಿಯೋ ಸಂದೇಶ ನೀಡಿರುವುದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
 
‘ನನ್ನ ಮೇಲೆ ವಿಶ್ವಾಸವಿಟ್ಟು ಮುಂದಿನ 26 ತಿಂಗಳುಗಳಿಗೆ ಮತ್ತೆ ಕೋಚ್ ಆಗಿ ಆಯ್ಕೆ ಮಾಡಿದ ಶಾಂತ, ಕಪಿಲ್ ಮತ್ತು ಅಂಶುಮಾನ್ ಗೆ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ. ಭಾರತ ತಂಡದ ಭಾಗವಾಗಿರುವುದು ದೊಡ್ಡ ಗೌರವದ ವಿಷಯ. ನನಗೆ ಈ ತಂಡದ ಮೇಲೆ ವಿಶ್ವಾಸವಿರುವದರಿಂದಲೇ ಇಲ್ಲಿಗೆ ಬಂದೆ. ಈ ತಂಡ ಹಿಂದಿನ ಎಲ್ಲಾ ತಂಡಗಳಂತೆ ಒಂದು ಇತಿಹಾಸ ಸೃಷ್ಟಿಸುತ್ತದೆ ಎಂಬುದು ನನ್ನ ವಿಶ್ವಾಸ’ ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೋತ ವೆಸ್ಟ್ ಇಂಡೀಸ್ ಗೆ ಬ್ರಿಯಾನ್ ಲಾರಾ, ಸರವಣ್ ತರಬೇತಿ

ಆಂಟಿಗುವಾ: ಭಾರತದ ವಿರುದ್ಧ ಈಗಾಗಲೇ ಟಿ20 ಮತ್ತು ಏಕದಿನ ಸರಣಿ ಸೋತು ಸುಣ್ಣವಾಗಿರುವ ವೆಸ್ಟ್ ಇಂಡೀಸ್ ತಂಡ ...

news

ಕೋಚ್ ಆಯ್ಕೆ ಸಂದರ್ಶನದ ವೇಳೆಯೇ ಬೇಡಿಕೆ ಮುಂದಿಟ್ಟಿದ್ದ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಶನದ ವೇಳೆ ಹಾಲಿ ಕೋಚ್ ಆಗಿರುವ ರವಿಶಾಸ್ತ್ರಿ ಕಪಿಲ್ ದೇವ್ ...

news

ರವಿಶಾಸ್ತ್ರಿಯನ್ನೇ ಆಯ್ಕೆ ಮಾಡುವುದಾದರೆ ಇಷ್ಟೆಲ್ಲಾ ನಾಟಕ ಬೇಕಿತ್ತಾ?!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿಯವರನ್ನೇ ಮುಂದುವರಿಸಿರುವ ಕಪಿಲ್ ದೇವ್ ನೇತೃತ್ವದ ಆಯ್ಕೆ ...

news

ಟೀಂ ಇಂಡಿಯಾಗೆ ಮತ್ತೆ ರವಿಶಾಸ್ತ್ರಿಯೇ ಕೋಚ್

ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಹಾಲಿ ಕೋಚ್ ರವಿಶಾಸ್ತ್ರಿಯನ್ನೇ ...