ಮುಂಬೈ: ಕೊರೋನಾದಿಂದಾಗಿ ಕ್ರೀಡಾ ಜಗತ್ತು ಸ್ತಬ್ಧವಾಗಿದೆ. ಆದರೆ ಇದೀಗ ಒಂದೊಂದಾಗಿ ಪುನರಾರಂಭವಾಗುವ ಮಾತು ಕೇಳಿಬರುತ್ತಿದೆ. ಈ ನಡುವೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಪುನರಾರಂಭದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲು ಐಪಿಎಲ್, ದೇಶೀಯ ಕ್ರೀಡೆಗಳು ಆರಂಭವಾಗಲಿ. ಆ ಬಳಿಕವೇ ಟಿ20 ವಿಶ್ವಕಪ್ ಆರಂಭವಾಗಲಿ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.ಸದ್ಯಕ್ಕೆ ಕ್ರೀಡಾಕೂಟ ನಡೆಯುವುದಕ್ಕೆ ನಾನು ಒತ್ತಾಯ ಹೇರುವುದಿಲ್ಲ. ಒಂದು ವೇಳೆ ಆರಂಭವಾಗುವುದಿದ್ದರೆ ಮೊದಲು ದೇಶೀಯ ಕ್ರಿಕೆಟ್, ಐಪಿಎಲ್, ಬಳಿಕ